ಇತ್ತೀಚೆಗೆ ಯಾರೋ ಒಬ್ಬ ಸ್ನೇಹಿತರ ಬ್ಲಾಗಿನಲ್ಲಿ ಮಣಿಪಾಲದ ಒಂದು ಹೊಸ ಹೋಟೆಲಿನ ಬಗ್ಗೆ ಓದಿದೆ. ಅದರಲ್ಲಿ ನನಗೆ ಮುಖ್ಯವಾಗಿ ಸೆಳೆದದ್ದು ‘ಜೋಳದ ರೊಟ್ಟಿ’ ಸಿಗುತ್ತದೆ ಎಂಬ ವಿಷಯ. ನಂಗೆ ತಿನ್ನುವುದು ಒಂದು ಸೆಳೆತ. ಯಾರು ಯಾವ ಊರಿಗೆ ಹೋಗಿ ಬಂದರೂ ನಂಗೆ ಅಲ್ಲಿಂದ ಏನಾದ್ರು ಸ್ಪೆಷಲ್ ತರ್ಬೆಕು. ಇತ್ತೀಚೆ ನನ್ನ ಒಬ್ಬ ಸ್ನೇಹಿತ ಹೋಗಿದ್ದ . ಅವ್ನ ಜೀವ ತಿಂದು ಶೇಂಗ ಒಬ್ಬಟ್ಟು , ಲಿಂಬೆ ಉಪ್ಪಿನಕಾಯಿ, ಜೋಳದ ರೊಟ್ಟಿ ಶೇಂಗ ಚಟ್ನಿ ತರ್ಸಿದ್ದೆ. ಹಾಗೆ ಮಣಿಪಾಲದಲ್ಲಿ ಉಂಟು ಹೇಳುವಾಗ ಏನೋ ಒಂದು ಆನಂದ. ಅದೇ ಅನಿರ್ವಚನೀಯ ಅಂತಾರಲ್ಲ ಅದೇ ಆಯ್ತು. ಹೋದೆ ಹುಡ್ಕಿಕೊಂಡು. ಒಂದು ಚಂದ ಮನೆಯಲ್ಲಿ ಇತ್ತು ಎ ‘ದೇಸಿ ಝಾಯ್ಕ ‘ ಹೋಟ್ಲು. ಒಳಗೆ ಹೊಗೊವಾಗ್ಲೆ ನನ್ ಸ್ನೇಹಿತ ವೆಂಕಟೇಶ ದೇಸಾಯಿ ಸಿಕ್ಕಿದ್ರು. ಏನ್ ಸಾರ್ ಇಲ್ಲಿ ಅಂದೆ . ನಂದೆ ಸಾರ್ ಹೋಟ್ಲು ಅಂದ್ರು . ಖುಷಿ ಆಯ್ತು . ಅದ್ಭುತವಾಗಿ ಕಟ್ಟಿದ ಒಂದು ಮನೆಯಲ್ಲಿ ಈ ಹೋಟ್ಲು . ಮೆನು ಓದುವಾಗ ನನ್ನ ಸಂತೋಷಕ್ಕೆ ಪಾರವೇ ಇಲ್ಲ. ಮಿರ್ಚಿ ಭಜ್ಜಿ , ಒಗ್ಗರಣೆ ಅವಲಕ್ಕಿ , ರಾಯಚೂರ್ ಥಾಲಿ ಇತ್ತು .ಜೋಳದ ರೊಟ್ಟಿ ಊಟ ಕೊಡಪ್ಪ ಅಂದೆ. ಅದ್ರ ಜೊತೆ ಮಿರ್ಚಿ ಭಜ್ಜಿ ಕೂಡ ಹೇಳ್ದೆ. ಆದ್ರೆ ಅವಲಕ್ಕಿ ಒಗ್ಗರಣೆ ಖಾಲಿ ಆಗಿತ್ತು . ಸಲ್ಪ ಹೊತ್ತಲ್ಲೇ ಬಂತು ನೋಡಿ. ಜೋಳದ ರೊಟ್ಟಿ , ಖಾರ ಉಪ್ಪಿನಕಾಯಿ , ಬದನೆ ತುಂಬಗಾಯಿ , ಶೇಂಗಾ ಚಟ್ನಿ , ಝುಣ್ಕ ಮತ್ತೆ ಸಲ್ಪ ತರಕಾರಿ ಸಲಾಡ್ . ಅದ್ರ ಜೊತೆ ತೊಂಡೆ ಪಲ್ಯ , ಪಾಯಸ , ಟೊಮೇಟೊ ಸಾರು, ಮೊಸರು, ಮಜ್ಜಿಗೆನೂ ಇತ್ತು . ಸಿಕ್ಕಾಪಟ್ಟೆ ಮೆದುವಾಗಿತ್ತು ರೊಟ್ಟಿ. ಸೀದಾ ಉತ್ತರ ಕರ್ನಾಟಕ ಖಾನಾವಳಿ ಹೋದಂಗೆ ಆಯ್ತು . ;ನಾಲಕ್ಕೈದು ರೊಟ್ಟಿ ತಿಂದ ಮೇಲೆ ಅನ್ನದೊಟ್ಟಿಗೆ ಚೆನ್ನಾಗಿರೋ ಸಾಂಬಾರ್ ಕೂಡ. ಹೊಟ್ಟೆ ತುಂಬಾ ತಿಂದು ಹೃದಯ ತುಂಬಿ ಹಾರೈಸಿ ಬಂದೆ. ಒಂದು ಒಳ್ಳೆ ಅನುಭವ. ಆದ್ರೆ ಖಾರ ಸಲ್ಪ ಕಮ್ಮಿ. ನಮ್ಮ ಊರಿನ ಜನಕ್ಕೆ ಅವ್ರು ಖಾರ ಕಮ್ಮಿ ಮಾಡಿದ್ದಂತೆ. ಇನ್ನು ಸ್ವಲ್ಪ ದಿನದಲ್ಲೇ ಗಿರ್ಮಿಟ್ , ಖಾರ ಮಂಡಕ್ಕಿ ಶುರು ಮಾಡ್ತಾರಂತೆ ದೇಸಾಯಿಗಳು. ಕಡೆಗೂ ಉಡುಪಿ-ಮಣಿಪಾಲದಲ್ಲಿ ರೊಟ್ಟಿ ಊಟದ ಬರ ನೀಗಿದೆ.
Thursday, July 30, 2015
ಮಣಿಪಾಲದಲ್ಲಿ ರೊಟ್ಟಿ ಊಟ

Subscribe to:
Post Comments (Atom)
No comments:
Post a Comment